Kannada Ogatugalu/ Kannada Riddles

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles with a brief English translation. This post is to promote kannada riddles. you may also contribute by sharing your favorite riddles in the comments section.

ಏನಿದು ? What is it ?

ಒಗಟು 43 - ತಲೆ ಮೇಲೆ ಹರಳು , ಬಾಯಲ್ಲಿ ಬೆರಳು / On top it has a pearl , inside mouth it has a finger
ಉತ್ತರ - ಉಂಗುರ / Ring

ಒಗಟು 42 - ಊರಿಗೆಲ್ಲ ಒಂದೇ ಕಂಬ್ಳಿ / Single blanket for the whole village
ಉತ್ತರ - ಆಕಾಶ / Sky

ಒಗಟು 41 - ಮಳೆ ಹುಯ್ಲಿ , ಹುಯ್ದೆ ಇರ್ಲಿ ಬಾಯಲ್ಲಾ ಕೆಂಪು , ಮೈಯೆಲ್ಲಾ ಹಸಿರು / Whether it rains or doesn't rain , mouth is full of red and body is full of green
ಉತ್ತರ - ಗಿಳಿ / Parrot


ಒಗಟು 40 - ಬಿಳಿ ಹುಡುಗನಿಗೆ ಕರಿಟೋಪಿ / A black hat for a white boy
ಉತ್ತರ - ಬೆಂಕಿ ಕಡ್ಡಿ / Match box stick


ಒಗಟು 39 - ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ / Before the small brother serves one , the big brother serves twelve
ಉತ್ತರ - ಗಡಿಯಾರ / Clock

ಒಗಟು 38 - ಮಣ್ಣಿನಲ್ಲಿ ಹುಟ್ಟಿ , ಮಣ್ಣಿನಲ್ಲಿ ಬೆಳೆದು , ಮಣ್ಣಿನಲ್ಲಿ ಸಾಯುವುದು / Its born in mud , Its grown in Mud , It dies in Mud
ಉತ್ತರ - ಮಡಿಕೆ / Mud pot

ಒಗಟು 37 - ನೀರಿನಲ್ಲಿ ಹಾಕಿದರೆ ಮುಳುಗುವುದಿಲ್ಲ ! ಬೆಂಕಿಯಲ್ಲಿ ಸುಡುವುದಿಲ್ಲ , ಕಲ್ಲಲ್ಲ ! ಇದು ಇಲ್ಲದವರಿಲ್ಲ / It does not drown in water, it does not get burnt in fire , Its not a stone , There is no one without it
ಉತ್ತರ - ನೆರಳು / Shadow

ಒಗಟು 36 - ಅರಳುತ್ತೆ , ಹೂವಲ್ಲ ! ಬಿಸಿಲಿಗೆ ಬಾಡುವುದಿಲ್ಲ / It blossoms but not a flower , it never gets faded from sunrays
ಉತ್ತರ - ಛತ್ರಿ / Umbrella

ಒಗಟು 35 - ಅವ್ವ ಮುಳ್ಳಿ , ಮಗಳು ಕೆಂಪ್ಗೆ ಚಂದಾಗವಳೆ / Mother is thorny , Daughter is red and beautiful
ಉತ್ತರ - ಹಲಸು / Jackfruit

ಒಗಟು 34 - ಚಂದ್ರನಂತೆ ಗುಂಡಾಗಿ ಎಲೆಗಿಂತಲೂ ತೆಳುವಾಗಿ, ತಿಂದರೆ ಬಲು ರುಚಿ / Round like a moon , thin like a leaf , very tasty to eat.
ಉತ್ತರ - ಹಪ್ಪಳ / Pappad

ಒಗಟು 33 - ಕಪ್ಪುಂಟು ಕಸ್ತೂರಿಯಲ್ಲ , ಬಿಳ್ಪುಂಟು ಸುಣ್ಣವಲ್ಲ , ನೀರುಂಟು ಬಾವಿಯಲ್ಲ , ರೆಕ್ಕೆಯುಂಟು ಪಕ್ಷಿಯಲ್ಲ. / It has Black , but it is not musk , It has white but its not Lime , It has water but it is not a well , It has feathers but it is not a bird
ಉತ್ತರ - ಕಣ್ಣು / Eyes


ಒಗಟು 32 - ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ , ನಿಮ್ಮಪ್ಪನೂ ಎತ್ತಲಾರ , ನಮ್ಮಪ್ಪನೂ ಎತ್ತಲಾರ / In a dark house if a pillar falls your father also cannot lift , my father also cannot lift it
ಉತ್ತರ - ಸೂಜಿ / Needle

ಒಗಟು 31 - ಒಂದು ಸುಣ್ಣದ ಗೋಡೆಗೆ , ಒಂದೂ ಬಾಗಿಲಿಲ್ಲ / For one white wall , there are no doors
ಉತ್ತರ - ಕೋಳಿ ಮೊಟ್ಟೆ / Egg

ಒಗಟು 30 - ಅಪ್ಪಾಂದ್ರೆ ಹೊಡಿತದೆ , ಅವ್ವಾಂದ್ರೆ ಹೊಡಿದಿಲ್ಲ - In kannada if u say Appa it claps , if u say Amma it doesnt clap. Its reverse in English if u say Father and Mother
ಉತ್ತರ - ತುಟಿಗಳು / Lips

ಒಗಟು 29 - ಒಂದು ಕಂಬ , ಅದಕ್ಕೆ ನಾಲ್ಕು ಕಿವಿಗಳು , ಅದರ ಮೆಲೊಂದು ಗುಂಡು / One pillar , it has 4 ears and over it one ball
ಉತ್ತರ - ಲವಂಗ / Clove

ಒಗಟು 28 - ಕುತ್ತಿಗೆಗೆ ಹಾಕಿದರೆ ಬರುತ್ತೆ , ಇಲ್ಲದಿದ್ದರೆ ಇಲ್ಲ / If you pull on its neck , it comes , else it does'nt

ಉತ್ತರ - ಬಿಂದಿಗೆ / Water-pot



ಒಗಟು 27 - ತಂದವರೊಬ್ಬರು ! ಹಿಡಿದವರೊಬ್ಬರು ! ಹೊತ್ತವರೊಬ್ಬರು / Brought by someone , Caught by someone , Taken by someone
ಉತ್ತರ - ಬಳೆ / Bangles





ಒಗಟು 27 - ಊರಿಗೆಲ್ಲಾ ಒಂದೇ ಕಂಬ್ಳಿ / One blanket for the whole village
ಉತ್ತರ - ಆಕಾಶ





ಒಗಟು 26 - ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ? / I sleep in morning and wake up by night , who am I ?
ಉತ್ತರ - ರಸ್ತೆ ದೀಪ / Street light

ಒಗಟು 25 - ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ! ಬೆನ್ನು ತೋಳುಂಟು ಮನುಷ್ಯನಲ್ಲ / It has 4 legs , but its not a animal . It has chest and Back , but its not human
ಉತ್ತರ - ಕುರ್ಚಿ / Chair

ಒಗಟು 24 - ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ ! / It was born in water , brought up in water , but when sees water disappears !!
ಉತ್ತರ - ಉಪ್ಪು / Salt

ಒಗಟು 23 - ಒಂದೇ ಕುಪ್ಪಿಲಿ , ಎರಡು ತರಾ ತುಪ್ಪ ! / In the same vial , there are two types of ghee
ಉತ್ತರ - ಮೊಟ್ಟೆ / Egg





ಒಗಟು 22 - ಆರು ಗೆರೆವುಂಟು , ಈರೆಕಾಯಲ್ಲ ! ಹುಳಿವುಂಟು , ಹುಣಸೆ ಅಲ್ಲ ! ಹಳದಿವುಂಟು , ನಿಂಬೆ ಹಣ್ಣಲ್ಲ ! / It has 6 lines , but its not ridge gourd ! It is sour but its not tamarind ! It is little yellowish , but its not lemon
ಉತ್ತರ - ನೆಲ್ಲಿಕಾಯಿ / Amla (Gooseberry)

ಒಗಟು 21 - ಕಾಲುಂಟು ಕೈಯಿಲ್ಲ ! ನಡುವುಂಟು ತಲೆಯಿಲ್ಲ ! ರಂಧ್ರಗಳ್ಳುಂಟು / It has legs , but no hands , it has waist but no head , it has many holes
ಉತ್ತರ - ಪ್ಯಾಂಟು / Pant

ಒಗಟು 20 - ನಾಲಿಗೆಯುಂಟು , ಮಾತಾಡುವುದಿಲ್ಲ ! ಮುಳ್ಳುಂಟು , ಪೊದೆಯಲ್ಲ ! / It has tongue but does not speak , It has a thorn but no bushes
ಉತ್ತರ - ಪೆನ್ನು / Pen





ಒಗಟು 19 - ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ / Good Hen, has layed eggs in torns
ಉತ್ತರ - ನಿಂಬೆಹಣ್ಣು / Lemon


ಒಗಟು 18 - ಹೊಕ್ಕುವಾಗ ಒಂದು ಹೊರಟಾಗ ನೂರು / While taking its one , while sending its many
ಉತ್ತರ - ಶ್ಯಾವಿಗೆ / Noodles

ಒಗಟು 17 - ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ ! / If kept within palms it fills the palm , if left fills the whole room
ಉತ್ತರ - ದೀಪ / Lamp light





ಒಗಟು 16 - ಬಿಳಿ ಲಂಗದ ಹುಡುಗಿ ! ಎಳೆದರೆ ಬರ್ತಾಳೆ ! ಬಿಟ್ಟರೆ ಓಡ್ತಾಳೆ / While skirt Girl ! If pulled comes in ! If pushed rushes out
ಉತ್ತರ - ಸಿಗರೇಟ್ ಹೊಗೆ / Cigarette smoke

ಒಗಟು 15 - ಗರಿಕೆ ಆಸೆ ದೇವರು ! ವರ್ಶಕ್ಕೊಮ್ಮೆ ಬರ್ತಾನೆ / Grass loving god who comes once in a year
ಉತ್ತರ - ಗಣಪತಿ / Ganapathi





ಒಗಟು 15 - ಕಪ್ಪೆ ಮುಟ್ಟದ ಕೈಲಾಸದ ನೀರು ! The god's water which a frog can't touch

ಉತ್ತರ - ಎಳೆನೀರು



ಒಗಟು 14 - ಕಲ್ಲನ್ನು ತುಳಿಯುತ್ತೆ ! ಮುಳ್ಳನ್ನು ಮೂಯುತ್ತೆ ! ನೀರು ಕಂಡ್ರೆ ನಿಲ್ಲುತ್ತೆ ! / It oppresses stone ! It pierces the thorns ! It stops at water
ಉತ್ತರ - ಚಪ್ಪಲಿ / Slippers





ಒಗಟು 13 - ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ ! / Mother's Bed cannot be tied , Father's money cannot be counted


ಉತ್ತರ - ಆಕಾಶ , ನಕ್ಷತ್ರಗಳು


ಒಗಟು 12 - ನೀಲಿ ಕೆರೇಲಿ ಬಿಳಿ ಮೀನು / A white fish in a blue lake

ಉತ್ತರ - ನಕ್ಷತ್ರ


ಒಗಟು 11 - ಕಣ್ಣಿಗೆ ಕಾಣೋದಿಲ್ಲ ! ಕೈಯಿಗೆ ಸಿಗೋದಿಲ್ಲ ! / Invisible and cannot catch
ಉತ್ತರ - ಗಾಳಿ / Wind




ಒಗಟು 10 - ಮಡಿಸಿದರೆ ಮೊಗ್ಗು ! ಬಿಡಿಸಿದರೆ ಹೂವು ! ಪರಿಮಳವಿಲ್ಲ ವಾಸ್ನೆ ಇಲ್ಲ ! / If folded its a bud , when opened its a flower , it has no scent .

ಉತ್ತರ - ಕೊಡೆ / Umbrella


ಒಗಟು 9 - ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ ! / Gold is thrown , silver is eaten
ಉತ್ತರ - ಬಾಳೆ ಹಣ್ಣು






ಒಗಟು 9 - ಅಕ್ಷರಗಳಿದ್ದರೂ ಪುಸ್ತಕವಲ್ಲ ! ಸಿಂಹವಿದ್ದರೂ ಅರಣ್ಯವಲ್ಲ ! ದುಂಡಾಗಿದ್ದರೂ ಚಕ್ರವಲ್ಲ ! ನಾನ್ಯಾರು ? / It has letters but its not a book , it has a lion but not a forest, it is round , but not a wheel


ಉತ್ತರ - ನಾಣ್ಯ / coin


ಒಗಟು 8 - ಹೋದ ನೆಂಟ ಬಂದ ನೆಂಟ ! ಬಂದ ದಾರಿ ಗೊತ್ತಿಲ್ಲ / The guest comes and goes , but the way they come is not known

ಉತ್ತರ - ನೆರಳು / Shadow


ಒಗಟು 7 - ಕಣ್ಣಿಗೆ ಹತ್ತಿರ , ಕಾಲಿಗೆ ದೂರ / Near for eyes , Far for Legs

ಉತ್ತರ - ದಿಗಂತ / Horizons


ಒಗಟು 6 - ಊರುಂಟು ಜನರಿಲ್ಲ ! ನದಿಯುಂಟು ನೀರಿಲ್ಲ ! ರಸ್ತೆಯುಂಟು ವಾಹನವಿಲ್ಲ ! ಹಾಗಾದರೆ ನಾನ್ಯಾರು ? / Village exists , but no one is there , There is river but no water , There is road but no vehicles , Who am ! ?
ಉತ್ತರ - ಭೂಪಟ / Map

ಒಗಟು 5 - ಅಣ್ಣ ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ ! ಆದರೆ ಯಾರೂ ಮುಂದೆ ಹೋಗುವುದಿಲ್ಲ ! / Both brothers try to go first one after other , but none of them comes first.
ಉತ್ತರ - ಕಾಲುಗಳು / Legs


ಒಗಟು 4 - ಹೋಗುತ್ತಾ ಬರುತ್ತಾ ಇರುವುದು ಎರಡು , ಎರಡೂ ಹೋದ ಮೇಲೆ ಬರಲಾರವು / Both keep coming and going , But both when gone does not come back
ಉತ್ತರ - ಸಿರಿತನ - ಬಡತನ , ಪ್ರಾಣ - ಮಾನ / Wealth - Poverty , Life force - Respect





ಒಗಟು 3 - ಕಚ್ಚಿದರೆ ಮಾತ್ರ ಕಚ್ಚುವುದು ! ಕಚ್ಚಲ್ಲ , ಹಾವಲ್ಲ , ಚೇಳಲ್ಲ / It bites if we bite ! It does not bite , its not a snake nor a scorpio

ಉತ್ತರ - ಮೆಣಸಿನ ಕಾಯಿ / Chilli


ಒಗಟು 2 - ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು / Bring it from shop and cry in front of it
ಉತ್ತರ - ಈರುಳ್ಳಿ / Onion





ಒಗಟು 1 - ಎರಡು ಮನೆಗೆ ಒಂದೇ ದೂಲ / Both houses have a common wall
ಉತ್ತರ - ಮೂಗು / Nose

    Blogger Comment
    Facebook Comment

0 comments:

Post a Comment